ninna olumeyinda….

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು |
ಮನ್ನಿಸುವರೊ ಮಹಾರಾಯ | pa |

ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ I

ನಿನ್ನದೇ ಸಕಲ ಸಂಪತ್ತು II a.pa II

ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ | ಊರ್ಣ ವಿಚಿತ್ರ
ವಸನಾ || ವರ್ಣವರ್ಣದಿಂದ ಬಾಹೋದೇನೊ ಸಂ |ಪೂರ್ಣ
ಗುಣಾರ್ಣವ ದೇವಾ ||

ಸಂಜೀತನಕ ಇದ್ದು ಸಣ್ಣ ಸವಟು ತುಂಬ | ಗಂಜಿ ಕಾಣದೆ |
ಬಳಲಿದೆನೊ || ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವದು ಮತ್ತೇನೋ ||

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ | ತಬ್ಬಿಬ್ಬುಗೊಂಡೆ ನಾ ಹಿಂದೆ |
ನಿಬ್ಬರದಲಿ ಸರ್ವರ ಕೂಡಿನ್ನು | ಹಬ್ಬವನುಂಡೆನೊ ಹರಿಯೇ ||

ಮನೆಮನೆ ತಿರುಗಿದೆ ಕಾಸುಪುಟ್ಟದೆ | ಸುಮ್ಮನೆ ಚಾಲವರಿದು
ಬಾಹೆನೊ || ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ | ಎನಗೆ ಪ್ರಾಪುತಿ
ನೋಡೋ ಜೀಯಾ ||

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ | ಮೆದ್ದೆನೆಂದರೆ
ಈಯದಾದೆ || ಈ ಧರೆಯೊಳು ಸತ್ಪಾತ್ರರಿಗುಣಿಸುವ | ಪದ್ಧತಿ ನೋಡೊ
ಧರ್ಮಾತ್ಮಾ ||

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ | ಚಾಚಿದೆ ನೊಸಲು
ಹಸ್ತಗಳ || ಯೋಚಿಸಿ ನೋಡಲು ಸೋಜಿಗವಾಗಿದೆ | ವಾಚಕೆ ನಿಲುಕದೊ
ಹರಿಯೇ ||

ವೈದಿಕ ಪದವಿಯ ಕೊಡುವನಿಗೆ ಲೌಕಿಕ | ನೈದಿಸುವುದು
ಮಹಾಖ್ಯಾತಿ || ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ | ಪಾದ
ಸಾಕ್ಷಿ ಅನುಭವವೊ
 ||

One thought on “ninna olumeyinda….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s