keertane – by srI kanakadAsaru

ರಾಗ: ಶಂಕರಾಭರಣ

ತಾಳ: ಛಾಪುತಾಳ

ಅಂಧಂತಮಸು ಇನ್ಯಾರಿಗೆ ಗೋ
ವಿಂದನ ನಿಂದಿಸುವರಿಗೆ || ಪ ||

ಸಂದೇಹವಿಲ್ಲವು ಸಾರಿಸಾರಿಗೆ ವಾಯು
ನಂದನಗೊಂದಿಸದವರಿಗೆ || ಅ ಪ ||

ಮಾತುಮಾತಿಗೆ ಹರಿಯ ನಿಂದಿಸಿ ಸ
ರ್ವೋತ್ತಮ ಶಿವನೆಂದು ವಂದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ ವೇ
ದೋಕ್ತ ಪ್ರಮಾಣಂಗಳ್ಹಾರಿಸಿ
ಸೋತು ಸಂಕಟಬಟ್ಟು ಪಾತಕೊಡಲೋಳಿಟ್ಟು
ನೀತಿ ಹೇಳುವಕೆಟ್ಟ ಜಾತಿಗಳಿಗಲ್ಲದೆ || ೧ ||

ಮೂಲಾವತಾರಕ್ಕೆ ಭೇದವು ಮುಖ್ಯ
ಶೀಲ ಪಂಡಿತರೊಳಗೆ ವಿವಾದವು
ಲೀಲಾ ಸಾದೃಶ್ಯವ ತೋರುತ
ಮೇಲೆ ಲಿಂಗಭಂಗವಿಲ್ಲದ ದೇಹ ಹಾರುತ
ಮೂಲ ಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟ ದುಶ್ಯೀಲರಿಗಲ್ಲದೆ || 2 ||

ಬ್ಯಾಸರ ಮಾತುಗಳಾಡುತ ವಿ
ಶ್ವಾಸ ಘಾತಕನ ಮಾಡುತ
ದೋಷವೆಂದರು ನುಡಿಕೇಳದೆ ಸಂ
ತೋಷವೆಂದು ತಾನು ಬಾಳದೆ
ಶೇಷಶಯನ ಸಿರಿ ಆದಿಕೇಶವರಾಯನ
ದಾಸರೊಡನಾಡದ ಮಧ್ವದ್ವೇಷಿಗಳಿಗಲ್ಲದೆ || 3 ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s